As Congress in Gujarat giving neck to neck fight to BJP, many twitterians blame BJP for its non performance and they said, this is a wake up call for BJP, in future it should not take any election lightly.
ಚುನಾವಣೋತ್ತರ ಸಮೀಕ್ಷೆಗಳಲ್ಲಿ ಭರ್ಜರಿ ಜಯ ದಾಖಲಿಸಿದ್ದ ಬಿಜೆಪಿ ಸದ್ಯಕ್ಕೆ ದಂಗಾಗಿ ಕೂತಿದೆ! ಬಿಜೆಪಿಗೆ ಸರಳ ಬಹುಮತ ಸಿಕ್ಕುವುದು ಕಷ್ಟವಾಗಲಾರದು ಅನ್ನಿಸಿದರೂ, ಕಾಂಗ್ರೆಸ್ ನೀಡುತ್ತಿರುವ ಸ್ಪರ್ಧೆಯನ್ನು ನೋಡಿದರೆ 22 ವರ್ಷಗಳ ಬಿಜೆಪಿ ಆಡಳಿತ ಗುಜರಾತ್ ಜನರಿಗೆ ತೃಪ್ತಿ ತಂದಿಲ್ಲವೇನೋ ಅನ್ನಿಸೋದು ಸುಳ್ಳಲ್ಲ.ಗುಜರಾತ್ ಫಲಿತಾಂಶದ ಹಿನ್ನಡೆ, ಮುನ್ನಡೆಯ ತೂಗುಯ್ಯಾಲೆಯಲ್ಲಿ ತೂಗುತ್ತಿರುವ ಬಿಜೆಪಿಯನ್ನು ಟ್ವಿಟ್ಟರ್ ನಲ್ಲಿ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಪೂರ್ಣ ಫಲಿತಾಂಶ ಇನ್ನೂ ಹೊರಬೀಳದಿದ್ದರೂ ಕಾಂಗ್ರೆಸ್ ವಿರುದ್ಧ ಗೆಲ್ಲುವುದಕ್ಕೆ ಹೆಣಗಾಡುತ್ತಿರುವ ಬಿಜೆಪಿಯ ಸ್ಥಿತಿಯನ್ನು ಕಂಡ ಹಲವರು, ಇದು ಬಿಜೆಪಿಗೆ ನೀತಿಪಾಠ ಎಂದು ವ್ಯಾಖ್ಯಾನಿಸಿದ್ದಾರೆ.ಕಾಂಗ್ರೆಸ್ ಗೆಲ್ಲಲಿ, ಬಿಡಲಿ ಆದರೆ ಮೋದಿಯವರ ಬಿಜೆಪಿ ಮಾತ್ರ ಸೋಲೋದು ಖಂಡಿತ ಎಂದು ಟ್ವಿಟ್ಟಿಗರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಫಲಿತಾಂಶ ಬಿಜೆಪಿ ತನ್ನ ಸಾಮರ್ಥ್ಯವನ್ನು, ಸಾಧನೆಯನ್ನು ನಿಕಷಕ್ಕೆ ಹಚ್ಚುವುದಕ್ಕೆ ಕಾಲಕೂಡಿಬಂದಿರುವುದರ ಸಂಕೇತ ಎಂದು ಕೆಲವರು ಹೇಳಿದ್ದಾರೆ.